ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

28 ಅಕ್ಟೋಬರ್ 2011

Swamy Vivekananda,

“You have to grow from the inside out. None can teach you,
none can make you spiritual.
There is no other teacher but your own soul.”-Swamy Vivekananda, 

Swamy Vivekananda

In a conflict between the heart and the brain, follow your heart. ”-Swamy Vivekananda,

Swamy Vivekananda

“The moment I have realized God sitting in the temple of every human body, the moment I stand in reverence before every human being and see God in him - that moment I am free from bondage, everything that binds vanishes, and I am free.” -Swamy Vivekananda 
ನಮ್ಮ ಕೋಪ ಎಷ್ಟು ದುಬಾರಿ ಆಗಿರ ಬೇಕೆಂದರೆ ಯಾರೂ ಕೊಂಡುಕೊಳ್ಳಲೇ ಬಾರದು. ನಮ್ಮ ನಗು ಹೇಗಿರಬೇಕೆಂದರೆ ಎಲ್ಲರಿಗೂ ಉಚಿತವಾಗಿ ಸಿಗುವಂತಿರಬೇಕು.

21 ಅಕ್ಟೋಬರ್ 2011

ನ್ಯೂಮಾನ್

ಯಾರಿಗೂ ನೋವನ್ನುಂಟು ಮಾಡದಿರುವವನೇ ಸಜ್ಜನ-ನ್ಯೂಮಾನ್

ಜಿಮ್ ಕ್ಯಾರಿ

ನಿಮಗೆ ಪ್ರತಿಭೆ ಇದ್ದರೆ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇರಿ-
ಜಿಮ್ ಕ್ಯಾರಿ

ಭಗವಾನ್ ಬುದ್ಧ

ನಿಮ್ಮ ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಿಮ್ಮನ್ನು ಹಿಂಬಾಲಿಸಲಿದೆ-ಭಗವಾನ್ ಬುದ್ಧ

ಸಂತ ಕಬೀರ್


ನೀವು ಎಲ್ಲರಿಂದ ದೂರಾಗಿ ಒಬ್ಬಂಟಿಗರಾಗಿದ್ದರೆ, ನಿಮ್ಮ ಪಾಪದ ಕೃತ್ಯಗಳಿಂದ ಸಂಕಟ ಪಡಬೇಕಾಗುತ್ತದೆ. -ಸಂತ ಕಬೀರ್

ಹೆನ್ರಿ ಫೋರ್ಡ್

ನಿಮ್ಮ ಬದುಕಿನಲ್ಲಿ ಘಟಿಸುವ ಒಂದು ಸಣ್ಣ ತಪ್ಪು ನಿಮ್ಮಲ್ಲಿ ಪರಿವರ್ತನೆಗೆ ದಾರಿ ತೋರುತ್ತದೆ.

ನೆಲ್ಸನ್ ಮಂಡೇಲಾ

ಸಾಧನೆಯ ಹಂತ ತಲುಪುವವರೆಗೆ ಎಲ್ಲವೂ ಕಷ್ಟ.

ಭಗವಾನ್ ಬುದ್ಧ

ಶಾಂತಿ ನಮ್ಮಳಗಿನಿಂದ ಬರುವಂತಹದ್ದು. ಅದನ್ನು ಹೊರಗಿನಿಂದ ನಿರೀಕ್ಷಿಸಬೇಡಿ.

ಭಗವಾನ್ ಬುದ್ಧ

ಯಾರು ಅಸಂತುಷ್ಟಿಯಿಂದ ಮುಕ್ತರಾಗುತ್ತಾರೋ ಅವರಿಗೆ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲಿದೆ.

ವಿಲಿಯಂ ಶೇಕ್ಸ್‌ಪಿಯರ್

ತಿಳಿದಿರುವುದಕ್ಕಿಂತ ಕಡಿಮೆ ಮಾತನಾಡುವುದು ಬುದ್ಧಿವಂತಿಕೆಯ ಲಕ್ಷಣ.
ಕೆಲವು ತೊಂದರೆ, ಕಿರಿಕಿರಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ, ಅದು ಹೆಚ್ಚು ಸಮಯ ಕಿರಿಕಿರಿಯಾಗಿ ಇರುವುದಿಲ್ಲ. ಬಹಳ ಬೇಗ ಹೊರಟುಹೋಗುತ್ತದೆ. ಅಂಥ ಕಿರಿಕಿರಿಗೆ ನಾವು ಯದ್ವಾ ತದ್ವಾ ವರ್ತಿಸಿದರೆ ನಮ್ಮ ಅಂಥ ವರ್ತನೆ ಮಾತ್ರ ಜನರ ಮನಸ್ಸಿನಲ್ಲಿ ಸದಾ ನೆಲೆಸಿರುತ್ತದೆ. ಕಿರಿಕಿರಿಗೆ ನಾವು ಕರಕರ ಮಾಡಬಾರದು, ಸಹಿಸಿಕೊಳ್ಳಬೇಕು.

19 ಅಕ್ಟೋಬರ್ 2011

ವಿಲಿಯಂ ಶೇಕ್ಸ್ ಪಿಯರ್

ತೀಕ್ಷ್ಣ ಬುದ್ದಿ ಆಧುನಿಕ ಜಗತ್ತಿನಲ್ಲಿ ಅಮೂಲ್ಯ ವರದಾನ-ಷೇಕ್ಸ್ ಪಿಯರ್

ಸ್ವಾಮಿ ವಿವೇಕಾನಂದ

ನಿಜವಾದ ಶಿಕ್ಷಕನೆಂದರೆ ಮಕ್ಕಳ ಮಟ್ಟಕ್ಕೆ ಇಳಿದು ತನ್ನಾತ್ಮವನ್ನು ವಿದ್ಯಾರ್ಥಿಗಳ ಆತ್ಮಕ್ಕೆ ವರ್ಗಾಯಿಸುವವರು-ಸ್ವಾಮಿ ವಿವೇಕಾನಂದ

ಗೌತಮ ಬುದ್ಧ

ಯಾರು ಅಸಂತುಷ್ಟಿಯಿಂದ ಮುಕ್ತರಾಗುತ್ತಾರೋ ಅವರಿಗೆ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲಿದೆ. –ಭಗವಾನ್ ಬುದ್ದ,

18 ಅಕ್ಟೋಬರ್ 2011


ನಿಮ್ಮ ಯೋಚನೆಗಳ ಬಗ್ಗೆ ನಿಗಾ ಇರಲಿ, ಅವೇ ಮಾತುಗಳಾಗುತ್ತವೆ.
ಮಾತಿನ ಮೇಲೆ ನಿಗಾ ಇರಲಿ, ಅವೇ ಕ್ರಿಯೆಗಳಾಗುತ್ತವೆ.
ಕ್ರಿಯೆಯ ಮೇಲೆ ನಿಗಾ ಇರಲಿ, ಅವೇ ಹವ್ಯಾಸಗಳಾಗುತ್ತವೆ.
ಹವ್ಯಾಸಗಳ ಮೇಲೆ ನಿಗಾ ಇರಲಿ, ಅವೇ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ.
ಆದ್ದರಿಂದ ನಮ್ಮ ಯೋಚನೆ ಯಾವತ್ತೂ ಉತ್ತಮವಾಗಿರಬೇಕು.

02 ಅಕ್ಟೋಬರ್ 2011

ಮಹಾತ್ಮ ಗಾಂಧೀಜಿ

`ನನ್ನ ಸೋದರಿಯರೇ, ನೀವು ಸ್ವತಂತ್ರರಾಗಬೇಕಾದರೆ ಮೊದಲು ನಿರ್ಭೀತರಾಗಿರಿ. ನಿಮ್ಮ ದೈಹಿಕ ದೌರ್ಬಲ್ಯಕ್ಕಿಂತ ಸಮಾಜ ನಿಮ್ಮ ಮೇಲೆ ವಿಧಿಸಿ ಬಿಡುವ ಸಾಂಸ್ಕೃತಿಕ ಅಸಹಾಯಕತೆ, ಮಾನಸಿಕ ಭಯ - ಇವೇ ಸಂಕೋಲೆಗಳಾಗಿ ನಿಮ್ಮನ್ನು ಕಾಡುತ್ತವೆ. ಮೊದಲು ಇವುಗಳಿಂದ ಹೊರ ಬನ್ನಿ. ವಿಶಾಲ ಜಗತ್ತು ನಿಮಗಾಗಿ ಕಾದಿದೆ~ ಮಹಾತ್ಮ ಗಾಂಧೀಜಿ. 

ಸ್ವಾಮಿ ವಿವೇಕಾನಂದರ ದಿವ್ಯ ವಾಣಿ

• ಯಾವುದಕ್ಕೂ ಅಂಜದಿರು; ಅಧ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು. ಆದುದರಿಂದ ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು.


• ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸಮಾಡಿಕೊಂಡು ಹೋಗಿ.


• ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು –ಇದೇ ಧರ್ಮದ ಸರ್ವಸ್ವ.


• ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.


• ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.


• ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು.


• ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.


• ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’, ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು. ಇಂತಹ ಶಕ್ತಿ ಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.


• ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಬರುತ್ತದೆ.


• ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.


• ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ.


• ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ; ಇಂದೋ ನಾಳೆಯೋ ಅಥವಾ ಯುಗಾಂತರವೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಮ್ಮ ಮಾನವಬಂಧುಗಳನ್ನು ನೀವು ಪ್ರೀತಿಸುತ್ತೀರೇನು?


• ಜೀವನಾವಧಿ ಅಲ್ಲ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು.


• ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.


• ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ.


• ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ. ಇತರರಿಗೆ ಸಹಾಯಮಾಡಿ.


• ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು.


• ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು.


• ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.


• ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.


• ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.


• ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ , ಸಹಾನುಭೂತಿಯುಳ್ಳವರಾಗಿ.


• ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.


• ಮೊದಲು ಚಾರಿತ್ರ್ಯವನ್ನು ಬೆಳೆಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು.


• ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.


• ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತಕಾರ್ಯ ಉದ್ಭವಿಸುತ್ತದೆ.


• ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ.


• ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ:
1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ
2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ
3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ.


• ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ.


• ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.


• ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.


• ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?


• ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.


• ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವು ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ಪಾರಾಗಬಹುದು.

ಡಾ. ಶಿವರಾಮ ಕಾರಂತ

ಮನುಷ್ಯ ಅಂದ ಮೇಲೆ ಮೊದಲು ಆತ್ಮಾಭಿಮಾನ ಹೊಂದಿರಬೇಕು.

ಆತ್ಮಾಭಿಮಾನ ಇಲ್ಲದವನು ನಿಜಕ್ಕೂ ಮನುಷ್ಯನಾಗಿ ಬೆಳೆಯಲಾರ.
 -ಶಿವರಾಮ ಕಾರಂತ

ಡಾ.ಎಸ್.ರಾಧಾಕೃಷ್ಣನ್


ವಿದ್ಯೆಯ ಮುಖ್ಯ ಗುರಿಯೇನೆಂದರೆ ಇತರರೊಡನೆ ಕೂಡಿ ಬಾಳುವ ಕಲೆಯನ್ನು ಕಲಿಸುವುದು..
-ಡಾ.ಎಸ್.ರಾಧಾಕೃಷ್ಣನ್..