ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

27 ಸೆಪ್ಟೆಂಬರ್ 2011

ಸ್ವಾಮಿ ವಿವೇಕಾನಂದ

ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ - ವಿಚಾರ ಮಾತ್ರ.

--ಸ್ವಾಮಿ ವಿವೇಕಾನಂದ

26 ಸೆಪ್ಟೆಂಬರ್ 2011

ಪ್ರಮಾದಗಳು ನಿಮ್ಮ ಅನುಭವವನ್ನು ಹೆಚ್ಚಿಸುತ್ತವೆ. 
ಅನುಭವ ನಿಮ್ಮ ಪ್ರಮಾದಗಳನ್ನು ಕಡಿಮೆಗೊಳಿಸುತ್ತವೆ. 
ನೀವು ನಿಮ್ಮ ಪ್ರಮಾದಗಳಿಂದ ಕಲಿಯಿರಿ.
ಬೇರೆಯವರು ನಿಮ್ಮ ಯಶಸ್ಸಿನಿಂದ ಕಲಿಯುತ್ತಾರೆ.
 ಆಗ ನೀವು ಆದರ್ಶರಾಗುತ್ತೀರಿ

25 ಸೆಪ್ಟೆಂಬರ್ 2011

ಸ್ವಾಮಿ ವಿವೇಕಾನಂದ

ಯಾವುದಕ್ಕೂ ಅಂಜದಿರಿ ; ಅದ್ಭುತ ಕಾರ್ಯವನ್ನೆಸಗುವೆ.
ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ.
ನಮ್ಮ ದುರವಸ್ಥೆಗಳಿಗೆಲ್ಲ ಭೀತಿಯೇ ಕಾರಣ.-ಸ್ವಾಮಿ ವಿವೇಕಾನಂದ
Don’t Make Your Voice loud to make others listen to you…!

Make your attitude so loud that others want to listen to you…!

21 ಸೆಪ್ಟೆಂಬರ್ 2011

19 ಸೆಪ್ಟೆಂಬರ್ 2011

http://upload.wikimedia.org/wikipedia/kn/2/2b/Akka_mahaadevi.jpg

ಅಕ್ಕಮಹಾದೇವಿಯ ವಚನಗಳ ಅಂಕಿತ-  ಚನ್ನಮಲ್ಲಿಕಾರ್ಜುನ

ಡಿ.ವಿ. ಜಿ. ರವರ ಕಗ್ಗಗಳು

ಜಗದಿ ಬಂದೀಗೃಹದಿ ಬಿಗಿಯುತಿದೆ ವಿಧಿ ನಿನ್ನ |
ನಿಗಮ ಸತ್ಯಲೆ ಕಾವ್ಯಗಳ ಗವಾಕ್ಷಗಳಿಂ ||
ಗಗನದೊಳನಂತದರ್ಶನದೆ ಮುಕ್ತಿಯನೊಂದು |
ನಗುನಗಿಸಿ ಲೋಕವನು - ಮಂಕುತಿಮ್ಮ ||

ವಿಧಿಯು ನಮ್ಮೆಲ್ಲರನ್ನು ಈ ಪ್ರಪಂಚವೆಂಬ ಸೆರಮನೆಯಲ್ಲಿ ಬಂಧಿಸಿ ಇಟ್ಟುಬಿಟ್ಟಿದೆ. ಯಾವುದೇ ಕಾರಣಕ್ಕೂ ನಾವು ಈ ಸೆರಮನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ !!! ಆದರೆ ಈ ಸೆರಮನೆಗೆ ಕಲೆ-ಪ್ರೀತಿ-ದ್ವೇಷಾಸೂಯೆ-ಕಾವ್ಯಗಳೆಂಬ ಕಿಟಕಿಯಿದೆ. ಆ ಕಿಟಕಿಯ ಮೂಲಕ ಆನಂತ ದರ್ಶನ ಮಾಡಬಹುದು. ಆದರೆ ಅದರಲ್ಲಿ ದ್ವೇಷಾಸೂಯೆ ಗಳನ್ನು ಬಿಟ್ಟು ಉಳಿದವುಗಳಿಂದ ಲೋಕವನ್ನು ನಗಿಸಿ, ಎಲ್ಲರ ಪ್ರೀತಿ - ಕೃಪೆಗೆ ಪಾತ್ರರಾಗಿ ಮುಕ್ತಿಯನ್ನು ಹೊಂದೋಣ.

ಡಿ.ವಿ. ಜಿ. ರವರ ಕಗ್ಗಗಳು

ಕ್ಷುತ್ತುಮಮತೆಗಳು ವೀವಕೆ ಕುಲಿಮೆಸುತ್ತಿಗೆಗಳ್ |
ಉತ್ತಮವದನಿಪುವುವು ಕಿಟ್ಟಗಳ ಕಳೆದು ||
ಚಿತ್ತ ಸಂಸ್ಕಾರಸಾಧನವಯ್ಯ ಸಮ್ಸಾರ |
ತತ್ತ್ವಪ್ರವೃತಂಗೆ - ಮಂಕುತಿಮ್ಮ ||

ನಮ್ಮಯ ಜೀವನದಲ್ಲಿ ಹೊಟ್ಟೆ ಮತ್ತು ಮಮತೆಗಳು ಕುಲುಮೆ ಮತ್ತು ಸುತ್ತಿಗೆಗಳು ಇದ್ದ ಹಾಗೆ... ಅದುವೇ ನಮ್ಮಯ ಜೀವನದ ಜ್ಯೋತಿಯ ಕಿಟ್ಟ ಕಳೆದು ಶುದ್ದಿ ಮಾಡುತ್ತದೆ. ಸಾಧಕನಿಗೆ ಸಂಸ್ಕಾರವು ದಿವ್ಯ ಸಾಧನವಾಗಿದೆ. ಸಾಧಕನು ತನ್ನಯ ಬಾಳಹಾದಿಯಲ್ಲಿ ಅಡ್ಡ ಬರುವ ಸಣ್ಣಪುಟ್ಟ ವಿಷಯಗಳನ್ನೇ ನೆನೆಯದೆ, ಪರಿತಪಿಸದೆ ತನ್ನಯ ದಾರಿಯಲ್ಲಿ ಸಾಗುತ್ತಲಿರುತ್ತಾನೆ

ಡಿ.ವಿ. ಜಿ. ರವರ ಕಗ್ಗಗಳು

ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ |
ಸೃಷ್ಟಿಯಲಿ ತತ್ವವೆಲ್ಲಿಯೊ ಬೆದಕಿ ನರನು ||
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೋ! |
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ ||


ಈ ಸೃಷ್ಟಿಯ ಬಗ್ಗೆ ನಾವೆಷ್ಟು ಯೋಚಿಸಿದರು ಸಹ, ನಮ್ಮಲ್ಲಿ ಒಂದು ವಿಧವಾದ, ಸಂದೇಹ ಮತ್ತು ಅಳುಕು ಬೆಳೆಯುತ್ತ ಹೋಗುತ್ತದೆ.
ಇದರಲ್ಲಿ ಏನಾದರು ಸಿದ್ಧಾಂತವಿದೆಯೆಂದು ಹುಡುಕುತ್ತ ಹೋದರೆ, ಈ ಬ್ರಹ್ಮ ವಿಧಿಯ ಪ್ರಕಾರ ನಾವು ಕಷ್ಟಪಡುತ್ತಲೇ ಇರಬೇಕು. ಇಷ್ಟೇ ನಮ್ಮ ಅವಸ್ಥೆಯೆಂದೆನಿಸುತ್ತದೆ.

17 ಸೆಪ್ಟೆಂಬರ್ 2011

ವಿಲಿಯಂ ಶೇಕ್ಸ್ ಪಿಯರ್

ತಿಳಿದಿರುವುದಕ್ಕಿಂತ ಕಡಿಮೆ ಮಾತಾಡುವುದು ವಿವೇಕಿಗಳ ಗುಣ- ಶೇಕ್ಸ್ ಪಿಯರ್

ಕುವೆಂಪು

ಉತ್ಸಾಹವೆಂಬುದು ಕಲ್ಲಿದ್ದಲ ಒಳಗೆ ಕುದಿಯುತ್ತಿರುವ ಕಾವಾಗಬೇಕೇ ವಿನಃ ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು -ಕುವೆಂಪು

ಮಹಾತ್ಮ ಗಾಂಧೀಜಿ

ಅಹಿಂಸೆ ಇಲ್ಲದೆ ಸತ್ಯ ಸಾಕ್ಷಾತ್ಕಾರ ಸಾಧ್ಯವಿಲ್ಲ.ಗಾಂಧೀಜಿ

ಬೆಂಜಮಿನ್ ಫ್ರಾಂಕ್ಲಿನ್

ಕಾರಣವಿಲ್ಲದೆ ಕೋಪ ಬರುವುದಿಲ್ಲ. ಆದರೆ ಅಪರೂಪಕ್ಕೊಮ್ಮೆ ಅದು ಒಳ್ಳೆಯ ಕಾರಣಕ್ಕೆ ಆಗಿರುತ್ತದೆ. -ಬೆಂಜಮಿನ್ ಫ್ರಾಂಕ್ಲಿನ್

ಬೆಂಜಮಿನ್ ಫ್ರಾಂಕ್ಲಿನ್

ಇಂದು ಮಾಡಬಹುದಾದ ಕೆಲಸವನ್ನು ನಾಳೆ ಮಾಡುವುದಕ್ಕೆಂದು ಬಿಡಬೇಡಿ- ಬೆಂಜಮಿನ್ ಫ್ರಾಂಕ್ಲಿನ್

ಬೆಂಜಮಿನ್ ಫ್ರಾಂಕ್ಲಿನ್

ನಿರಾಸೆಯು ಕೆಲವರನ್ನು ಹಾಳು ಮಾಡಿದರೆ, ಅತಿಯಾಸೆ ಅನೇಕರನ್ನು ಹಾಳು ಮಾಡುತ್ತದೆ-ಬೆಂಜಮಿನ್ ಫ್ರಾಂಕ್ಲಿನ್ 

ಬೆಂಜಮಿನ್ ಫ್ರಾಂಕ್ಲಿನ್

ನಿಮ್ಮ ಶತ್ರುಗಳನ್ನು ಪ್ರೀತಿಸಿ. ಎಕೆಂದರೆ ಅವರು ನಿಮ್ಮ ತಪ್ಪುಗಳನ್ನು ನಿಮಗೆ ತಿಳಿಸುತ್ತಾರೆ.-ಬೆಂಜಮಿನ್ ಫ್ರಾಂಕ್ಲಿನ್ 

ಥಾಮಸ್ ಪುಲ್ಲರ್

ಆಳುವಾಗ ಒಂಟಿಯಾಗಿ ಆಳು, ನಗುವಾಗ ಎಲ್ಲರೊಡನೆ ನಗು. — ಥಾಮಸ್

ಡಾ. ರಾಧಾಕೃಷ್ಣನ್

ಧರ್ಮವೆಂದರೆ ಒಳ್ಳೆಯ ನಡತೆ; ಬರೇ ನಂಬಿಕೆಯಲ್ಲ.- ಡಾ. ರಾಧಾಕೃಷ್ಣನ್ 

ಡಾ.ಎಸ್. ರಾಧಾಕೃಷ್ಣನ್


ಶಿಕ್ಷಣದ ಮುಖ್ಯ ಗುರಿ ಕೂಡಿ ಬಾಳುವುದನ್ನು ಕಲಿಸುವುದಾಗಬೇಕು- ಡಾ.ಎಸ್. ರಾಧಾಕೃಷ್ಣನ್


ಶಿವರಾಮಕಾರಂತ

ಬದುಕನ್ನು ನಾವು ನಿರಾಕರಿಸಬಾರದು. ಜೀವನದಿಂದಲೇ ಜೀವನ ಎಂಬುದನ್ನು ತಿಳಿಯಬೇಕು.-ಶಿವರಾಮಕಾರಂತ.

ಜವಹರ್ ಲಾಲ್ ನೆಹರು

ಜೀವನದಲ್ಲಿ ತತ್ವ ಮತ್ತು ಸಿದ್ದಾಂತಗಳನ್ನು ಮರೆತಾಗ ಸೋಲು ಎದುರಾಗುತ್ತದೆ-ಜವಹರ್ ಲಾಲ್ ನೆಹರು. 

ಜವಹರ್ ಲಾಲ್ ನೆಹರು


ನಮ್ಮ ಚಿಂತನೆಯೇ ನಮಗೆ ಫಲವನ್ನು ಕೊಡುತ್ತದೆ-ಜವಹರ್ ಲಾಲ್ ನೆಹರು. 


ಜವಹರ್ ಲಾಲ್ ನೆಹರು


ಆದರ್ಶಗಳಿಲ್ಲದ ಮನುಷ್ಯನಲ್ಲಿ ಯಾವುದೇ ಗೊತ್ತು ಗುರಿ ಮತ್ತು ಒಳ್ಳೆಯ ಉದ್ದೇಶಗಳಿರುವುದಿಲ್ಲ.-ಜವಹರ್ ಲಾಲ್ ನೆಹರು. 


ಕನ್‌ಫ್ಯೂಷಿಯಸ್

ಕ್ರೂರ ಹುಲಿಗಿಂತ ಕ್ರೂರವಾದುದೆಂದರೆ ಜನರನ್ನು ಹಿಂಸಿಸುವ ಸರಕಾರ.--ಕನ್‌ಫ್ಯೂಷಿಯಸ್

ಕನ್‌ಫ್ಯೂಷಿಯಸ್



ನೋವೆಲ್ಲಾ ಜೀವಕ್ಕೆ ಪುಟವಿಡುವ ಪಾಕ.--ಕನ್‌ಫ್ಯೂಷಿಯಸ್


ಎಮರ್ಸನ್

ಸಣ್ಣಪುಟ್ಟ ಉಪಕಾರಗಳೂ ಒಳ್ಳೆಯ ನಡವಳಿಕೆಯನ್ನು ಮೂಡಿಸುತ್ತವೆ.-- ಎಮರ್ಸನ್

ಆಲ್ಬರ್ಟ್ ಐನ್‍ಸ್ಟೀನ್

ಇಂದ್ರಿಯಗಳ ದಾಸನು ದುಃಖಗಳ ದಾಸನೂ ಆಗುತ್ತಾನೆ.- ಆಲ್ಬರ್ಟ್ ಐನ್‍ಸ್ಟೀನ್

ಆಲ್ಬರ್ಟ್ ಐನ್‍ಸ್ಟೀನ್

ಕನಸುಗಳನ್ನು ಸಾಕಾರಗೊಳಿಸಲು ನೀವು ಮಾಡುವ ಪ್ರಯತ್ನ ನಿಮ್ಮ ಮಿತಿಯನ್ನೂ ಮೀರಿ ನೀವು ಬೆಳೆಯುವಂತೆ ಮಾಡಿಬಿಡುತ್ತದೆ.-- ಆಲ್ಬರ್ಟ್ ಐನ್‍ಸ್ಟೀನ್

ಆಲ್ಬರ್ಟ್ ಐನ್‍ಸ್ಟೀನ್

ಕೆಲವು ಸಣ್ಣ ವಿಷಯಗಳಲ್ಲಿ ಸತ್ಯ ಹೇಳಲು ನಿರ್ಲಕ್ಷ್ಯ ತೋರಿಸಿದರೆ ಕೆಲವು ಪ್ರಮುಖ ವಿಷಯಗಳಲ್ಲಿ ಅಂತಹವರನ್ನು ಇತರರು ನಂಬುವುದಿಲ್ಲ-ಆಲ್ಬರ್ಟ್ ಐನ್‍ಸ್ಟೀನ್

ಆಲ್ಬರ್ಟ್ ಐನ್‍ಸ್ಟೀನ್

ಜ್ಞಾನಕ್ಕಿಂತ ಕಲ್ಪನೆಯೇ ಹೆಚ್ಚು ಮುಖ್ಯವಾದುದು-ಆಲ್ಬರ್ಟ್ ಐನ್‍ಸ್ಟೀನ್

ಆಲ್ಬರ್ಟ್ ಐನ್‍ಸ್ಟೀನ್

ಯಶಸ್ಸಿನ ವ್ಯಕ್ತಿಯಾಗುವ ಬದಲಿಗೆ ಮೌಲ್ಯಯುತ ವ್ಯಕ್ತಿಯಾಗುವುದಕ್ಕೆ ಪ್ರಯತ್ನಿಸಿ-ಆಲ್ಬರ್ಟ್ ಐನ್‍ಸ್ಟೀನ್

ಆಲ್ಬರ್ಟ್ ಐನ್‍ಸ್ಟೀನ್

ವಿಜ್ಞಾನವನ್ನು ಜೀವನ ನಿರ್ವಹಣೆಗಾಗಿ ಬಳಸಿಕೊಂಡಿಲ್ಲ ಎಂದಾದರೆ ಅದ್ಭುತ ವಿಷಯ- ಆಲ್ಬರ್ಟ್ ಐನ್‍ಸ್ಟೀನ್

ಅಬ್ರಹಾಂ ಲಿಂಕನ್

ಯಶಸ್ಸು ಗಳಿಸಬೇಕು ಎಂಬ ನಿಮ್ಮ ಅಚಲ ನಿರ್ದಾರ  ಮಾತ್ರ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯಬಲ್ಲುದು-ಅಬ್ರಹಾಂ ಲಿಂಕನ್

ಅ.ನ.ಕೃ


ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ.
ತಾಯಿ ಇಲ್ಲದ ತವರಿಗೆ ಮಗಳು ಬಂದರೆ ಉರಿಬೇಸಗೆಯಲ್ಲಿ ಮರಳು ಗಾಡಿಗೆ ಬಂದಂತೆ.- ಅ.ನ.ಕೃ

ಕುವೆಂಪು

ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು- ಕುವೆಂಪು 

ಸ್ವಾಮಿ ವಿವೇಕಾನಂದ

ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!- ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ

ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?!- ಸ್ವಾಮಿ ವಿವೇಕಾನಂದ

16 ಸೆಪ್ಟೆಂಬರ್ 2011

ಸ್ವಾಮಿ ವಿವೇಕಾನಂದ

ಮಹಾ ಮೂರ್ಖನೂ ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ
ಆದರೆ ಯಾರು ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು.
-ಸ್ವಾಮಿ ವಿವೇಕಾನಂದ

13 ಸೆಪ್ಟೆಂಬರ್ 2011

ನಾ ಮೆಚ್ಚಿದ ನುಡಿಮುತ್ತುಗಳು

ಒಂದು ಸಂದರ್ಭದಲ್ಲಾದ ನೋವು, ಬೇಸರ ಇಡೀ ದಿನದ ಮೂಡನ್ನು ಹಾಳಾಗಲು ಬಿಡಬಾರದು. 

ಒಂದು ಕಹಿ ಘಟನೆಯಿಂದ ಇಡೀ ಸಂಬಂಧವನ್ನು ಕಡಿದುಕೊಳ್ಳಬಾರದು.

ನಾ ಮೆಚ್ಚಿದ ನುಡಿಮುತ್ತುಗಳು


ನೀವು ಕಿಸೆಯಲ್ಲಿ ಎಷ್ಟೇ ತುಂಬಿಕೊಂಡರೂ ಅದು ಕೆಲವೇ ದಿನಗಳಿಗೆ ಸಾಕಾಗಬಹುದು.

ಅದೇ ಹೃದಯದಲ್ಲಿ ತುಂಬಿಕೊಂಡರೆ ಜೀವನ ಪರ್ಯಂತ ಸಾಕಾಗುತ್ತದೆ.


ಹೃದಯ ಶ್ರೀಮಂತಿಕೆಯ ಮುಂದೆ ಉಳಿದುದೆಲ್ಲವೂ ಗೌಣ

ನಾ ಮೆಚ್ಚಿದ ನುಡಿಮುತ್ತುಗಳು

ಈ ಜಗತ್ತಿನಲ್ಲಿ ಯಾರೊಬ್ಬರು ಪರಿಶುದ್ಧರೂ,ಪರಿಪೂರ್ಣರೂ ಅಲ್ಲ..
ಒಂದೊಂದು ದೋಷ ಹುಡುಕುತ್ತ ನಮಗೆ ಸಿಗುವ ಒಬ್ಬೋಬ್ಬರನ್ನು ದೂರ ಮಾಡುತ್ತ ಹೋದರೆ ಕೊನೆಗೆ ಏಕಾಂಗಿಯಾಗಿ ಬಿಡುತ್ತೇವೆ...