"ನನ್ನ ಕಾರ್ಯದಲ್ಲಿ ಯಶಸ್ಸು ಸಿಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುವುದಕ್ಕಿಂತ; ನಾನು ಮಾಡುವ ಕಾರ್ಯದಲ್ಲಿ ನನಗೆ ವಿಧೇಯತೆ ದಯಪಾಲಿಸು ಎಂದು ಬೇಡುತ್ತೇನೆ. ---ಮದರ್ ಥೆರೆಸಾ"
ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"
31 ಜುಲೈ 2011
16 ಜುಲೈ 2011
ಎಮರ್‍ಸನ್
ಮಾತು ’ತಪ್ಪ’ದ ಹಾಗೆ ನೋಡಿಕೊಳ್ಳಬೇಕಾದರೆ ನೀವು ಯಾರ ಜೊತೆ-ಯಾವಾಗ, ಎಲ್ಲಿ ಹಾಗೂ ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ.
ಕ್ರಿಸ್ಟೋಫರ್ ರೀವ್
ಹೆಚ್ಚಿನ ಕನಸುಗಳು ಮೊದಲು ಅಸಾಧ್ಯ ಎಂದೇ ತೋರುತ್ತವೆ. ಆದರೆ ಅವುಗಳನ್ನು ನನಸು ಮಾಡಲು ನಾವು ಮನಸ್ಸು ಕೊಟ್ಟಾಗ ಅವುಗಳು ನಮಗೆ ಅನಿವಾರ್ಯವಾಗಿ ಬಿಡುತ್ತವೆ.
ಮಹಾಭಾರತ
ಯೋಗ್ಯತೆಗೆ ಕುಲರೂಪಗಳು ಕಾರಣವಲ್ಲ, ಉತ್ತಮರಾಗಲೀ, ಅಲ್ಪರಾಗಲೀ, ತಮ್ಮ ಕಾರ್ಯದಿಂದ ಶ್ರೇಷ್ಠ ರಾಗುವರು" -ಮಹಾಭಾರತ
08 ಜುಲೈ 2011
ಮನುಸ್ಮೃತಿ
ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.
ಸರ್ವಜ್ಞ
ಅನ್ನವನು ಇಕ್ಕುವ ಅನ್ಯಜಾತನೆ ಕುಲಜ
ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು- ಸರ್ವಜ್ಞ
ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು- ಸರ್ವಜ್ಞ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)