ವಿಧಿಯು ನಮ್ಮೆಲ್ಲರನ್ನು ಈ ಪ್ರಪಂಚವೆಂಬ ಸೆರಮನೆಯಲ್ಲಿ ಬಂಧಿಸಿ ಇಟ್ಟುಬಿಟ್ಟಿದೆ. ಯಾವುದೇ ಕಾರಣಕ್ಕೂ ನಾವು ಈ ಸೆರಮನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ !!! ಆದರೆ ಈ ಸೆರಮನೆಗೆ ಕಲೆ-ಪ್ರೀತಿ-ದ್ವೇಷಾಸೂಯೆ-ಕಾವ್ಯಗಳೆಂಬ ಕಿಟಕಿಯಿದೆ. ಆ ಕಿಟಕಿಯ ಮೂಲಕ ಆನಂತ ದರ್ಶನ ಮಾಡಬಹುದು. ಆದರೆ ಅದರಲ್ಲಿ ದ್ವೇಷಾಸೂಯೆ ಗಳನ್ನು ಬಿಟ್ಟು ಉಳಿದವುಗಳಿಂದ ಲೋಕವನ್ನು ನಗಿಸಿ, ಎಲ್ಲರ ಪ್ರೀತಿ - ಕೃಪೆಗೆ ಪಾತ್ರರಾಗಿ ಮುಕ್ತಿಯನ್ನು ಹೊಂದೋಣ.
ನಮ್ಮಯ ಜೀವನದಲ್ಲಿ ಹೊಟ್ಟೆ ಮತ್ತು ಮಮತೆಗಳು ಕುಲುಮೆ ಮತ್ತು ಸುತ್ತಿಗೆಗಳು ಇದ್ದ ಹಾಗೆ... ಅದುವೇ ನಮ್ಮಯ ಜೀವನದ ಜ್ಯೋತಿಯ ಕಿಟ್ಟ ಕಳೆದು ಶುದ್ದಿ ಮಾಡುತ್ತದೆ. ಸಾಧಕನಿಗೆ ಸಂಸ್ಕಾರವು ದಿವ್ಯ ಸಾಧನವಾಗಿದೆ. ಸಾಧಕನು ತನ್ನಯ ಬಾಳಹಾದಿಯಲ್ಲಿ ಅಡ್ಡ ಬರುವ ಸಣ್ಣಪುಟ್ಟ ವಿಷಯಗಳನ್ನೇ ನೆನೆಯದೆ, ಪರಿತಪಿಸದೆ ತನ್ನಯ ದಾರಿಯಲ್ಲಿ ಸಾಗುತ್ತಲಿರುತ್ತಾನೆ
ಈ ಸೃಷ್ಟಿಯ ಬಗ್ಗೆ ನಾವೆಷ್ಟು ಯೋಚಿಸಿದರು ಸಹ, ನಮ್ಮಲ್ಲಿ ಒಂದು ವಿಧವಾದ, ಸಂದೇಹ ಮತ್ತು ಅಳುಕು ಬೆಳೆಯುತ್ತ ಹೋಗುತ್ತದೆ.
ಇದರಲ್ಲಿ ಏನಾದರು ಸಿದ್ಧಾಂತವಿದೆಯೆಂದು ಹುಡುಕುತ್ತ ಹೋದರೆ, ಈ ಬ್ರಹ್ಮ ವಿಧಿಯ ಪ್ರಕಾರ ನಾವು ಕಷ್ಟಪಡುತ್ತಲೇ ಇರಬೇಕು. ಇಷ್ಟೇ ನಮ್ಮ ಅವಸ್ಥೆಯೆಂದೆನಿಸುತ್ತದೆ.
ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!- ಸ್ವಾಮಿ ವಿವೇಕಾನಂದ
ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?!- ಸ್ವಾಮಿ ವಿವೇಕಾನಂದ
ಮಹಾ ಮೂರ್ಖನೂ ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ
ಆದರೆ ಯಾರು ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು.
-ಸ್ವಾಮಿ ವಿವೇಕಾನಂದ