ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

21 ನವೆಂಬರ್ 2012

ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವುದೇ ಎಲ್ಲ ವಿದ್ಯೆಗಳ ಗುರಿ.
ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡು ಹೋಗುವುದೇ ಎಲ್ಲ ಜ್ಯೋತಿಗಳ ಧರ್ಮ
ನಮ್ಮ ಬದುಕುಗಳಲ್ಲಿ ಅಜ್ಞಾನವು ತೊಲಗುವ ಜ್ಞಾನದ ಬೆಳಕು ಬೆಳಗುವ ಜ್ಯೋತಿಗಾಗಿ ಪ್ರಾರ್ಥಿಸಬೇಕು - ಅನಾಮಿಕ.

20 ನವೆಂಬರ್ 2012

ಸುಖ ಸ್ನೇಹಿತರನ್ನು ಕರೆ ತರುತ್ತದೆ; ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ.- ಪಬ್ಲಿಯಸ್ ಸೈರಸ್
ಶಾಂತಿ ನಮ್ಮೊಳಗಿನಿಂದ ಬರುವಂತಹದ್ದು. ಅದನ್ನು ಹೊರಗಿನಿಂದ ನಿರೀಕ್ಷಿಸಬೇಡಿ.- ಭಗವಾನ್ ಬುದ್ಧ
ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನೂ ಓದದೆ, 
ಯಾವ ಮಂದಿರವನ್ನೂ ಪ್ರವೇಶಿಸದೆ ಮೋಕ್ಷ ಪಡೆಯಬಹುದು.
-- ಸ್ವಾಮಿ ವಿವೇಕಾನಂದ